ಮಂಗಳೂರು, ನ. 22 (DaijiworldNews/AA): ಅಥೆನಾ ಆಸ್ಪತ್ರೆ ಮತ್ತು ಅಥೆನಾ ಸಮೂಹ ಸಂಸ್ಥೆಗಳ ಛೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಸ್. ಶೆಟ್ಟಿಯಾನ್(65) ಅವರು ನವೆಂಬರ್ 21 ರಂದು ನಿಧನರಾಗಿದ್ದಾರೆ.

ಶೆಟ್ಟಿಯಾನ್ ಅವರು ಪ್ರೈವೇಟ್ ಮತ್ತು ನಾನ್ ಪ್ರೋಫಿಟ್ ಕ್ಷೇತ್ರಗಳಲ್ಲಿ ಅನೇಕ ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು. ಅವರು ವೈ.ಎಂ.ಸಿ.ಎ. ಆಫ್ ಇಂಡಿಯಾದ ರಾಷ್ಟ್ರೀಯ ಖಜಾಂಚಿ ಮತ್ತು ಟ್ರಸ್ಟಿ ಆಗಿ ಆಯ್ಕೆಯಾಗಿದ್ದರು. 158 ವರ್ಷಗಳ ಭಾರತೀಯ ವೈ.ಎಂ.ಸಿ.ಎ. ಚಳವಳಿಯ ಇತಿಹಾಸದಲ್ಲಿ, ಭಾರತೀಯ ವೈ.ಎಂ.ಸಿ.ಎ.ದ ರಾಷ್ಟ್ರೀಯ ಖಜಾಂಚಿ ಮತ್ತು ವೈ.ಎಂ.ಸಿ.ಎ. ಕರ್ನಾಟಕದ ಟ್ರಸ್ಟಿ ಹುದ್ದೆಗಳಿಗೆ ಆಯ್ಕೆಯಾದ ಕರ್ನಾಟಕದ ಮೊದಲಿಗ ಇವರಾಗಿದ್ದರು.
ಶೆಟ್ಟಿಯಾನ್ ಅವರು ಬಲ್ಮಠದಲ್ಲಿರುವ ಸಿಎಸ್ಐ ಶಾಂತಿ ಕ್ಯಾಥೆಡ್ರಲ್ನ ಸದಸ್ಯರಾಗಿದ್ದರು. ಅವರು ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.