ಕಾಸರಗೋಡು, ನ. 26 (DaijiworldNews/AK): ಕಾಸರಗೋಡು ಸಬ್ ಜೈಲ್ ನಲ್ಲಿ ವಿಚಾರಣಾಧೀನ ಕೈದಿ ಯೋರ್ವ ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.


ದೇಳಿ ನಿವಾಸಿ ಮುಬಾಶಿರ್(30) ಮೃತಪಟ್ಟವನು. ಬುಧವಾರ ಬೆಳಿಗ್ಗೆ ಘಟನೆ ನಡೆದಿದೆ . ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಮುಂಜಾನೆ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾದ ಮುಬಾಶಿರ್ ನನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟನು. ಸಾವಿಗೆ ನಿಖರ ಕಾರಣ ಬಂದಿಲ್ಲ. ಕೊಲೆ ಎಂಬ ಆರೋಪ ಕುಟುಂಬ ವಲಯದಿಂದ ಕೇಳಿ ಬರುತ್ತಿದೆ. ನವಂಬರ್ ಐದರಂದು ಫೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿತ್ತು.
2016 ರಲ್ಲಿ ಫೋಕ್ಸೋ ಪ್ರಕರಣಕ್ಕೆ ದಾಖಲಾಗಿತ್ತು . ವಿದೇಶಕ್ಕೆ ತೆರಳಿದ್ದ ಮುಬಾ ಶಿರ್ ಎರಡು ತಿಂಗಳ ಹಿಂದೆ ಊರಿಗೆ ಬಂದಿದ್ದನು. ಮೂರು ವಾರಗಳ ಹಿಂದೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಸೋಮವಾರ ಹಾಗೂ ಮಂಗಳವಾರ ಕುಟುಂಬಸ್ಥರು ಸಬ್ ಜೈಲ್ ಗೆ ಭೇಟಿ ನೀಡಿದ್ದು, ಈ ಸಂದರ್ಭ ದಲ್ಲಿ ಮುಬಾಶಿರ್ ಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದರಿಂದ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ