ಮಂಗಳೂರು, ನ. 26 (DaijiworldNews/TA): ನಾಡಿನೆಲ್ಲೆಡೆ ಷಷ್ಠಿ ಸಂಬ್ರಮ. ಅಂತೆಯೇ ನಗರದ ಹೆಸರಾಂತ ಕುಡುಪುವಿನ ಅನಂತಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ಷಷ್ಠಿಯ ಸಂದರ್ಭ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಇಂದು ಬೆಳಗ್ಗಿನಿಂದಲೇ ದೇವರಿಗೆ ವಿಶೇಷ ಅಲಂಕಾರ ಪೂಜಾ ವಿಧಿವಿಧಾನಗಳು ನಡೆದವು.. ಷಷ್ಠಿ ಮಹೋತ್ಸವದ ಸಂದರ್ಭ ದೇವಸ್ಥಾನದಲ್ಲಿ ಭಕ್ತಸಾಗರವೇ ಹರಿದುಬಂತು.