ಉಡುಪಿ, ನ. 27 (DaijiworldNews/TA): ಪ್ರಧಾನಿ ಮೋದಿ ಅವರು ನ.28ರಂದು ಸ್ವರ್ಣ ಕವಚ, ಸುವರ್ಣ ತೀರ್ಥ ಮಂಟಪ ಉದ್ಘಾಟಿಸಲಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಈ ಬಗ್ಗೆ ಶ್ರೀ ಕೃಷ್ಣ ಮಠದ ಗೀತಾ ಮಂದಿರದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ವಿವರಣೆಯನ್ನು ನೀಡಿ 12 ಗಂಟೆಗೆ ಪ್ರಧಾನಿ ಮೋದಿ ಅವರು ಆಗಮಿಸಿ ಕನಕದಾಸರಿಗೆ ಪುಷ್ಫಾರ್ಚನೆಯನ್ನು ಮಾಡಿ ಬಂಗಾರದಿಂದ ಮಾಡಿದಂತಹ ಕನಕ ಕವಚವನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಪ್ರಧಾನಿ ಅವರಿಗೆ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನವನ್ನು ಮಾಡಲಿದ್ದಾರೆ. ಪೂರ್ಣಕುಂಭ ಮುಖಾಂತರ ಮಹಾ ದ್ವಾರದ ಮೂಲಕ ಸ್ವಾಗತಿಸಿ, ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಆದ ಬಳಿಕ ಗರ್ಭಗುಡಿಯಲ್ಲಿ ಶ್ರೀ ಕೃಷ್ಣನ ದರ್ಶನ, ಪ್ರಾಣ ದೇವರ ದರ್ಶನವನ್ನು ನಡೆಸಿ ಗೋಶಾಲೆ ಹಾಗೂ ಗೀತಾ ಮಂದಿರವನ್ನು ಪ್ರವೇಶಿಸುತ್ತಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.