ಬಂಟ್ವಾಳ, ನ. 27 (DaijiworldNews/TA): ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಸುಮಾರು 99 ವರ್ಷ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದುಕೊಂಡು ಬಂದಿದ್ದು ದಿ. ಸದಾನಂದ ಪೂಂಜರ ನೇತೃತ್ವದಲ್ಲಿ ಶುರುವಾದ ಈ ಶಾರದಾ ಪೂಜಾ ಕಾರ್ಯಕ್ರಮವು ಇದೀಗ 100ನೇ ವರ್ಷಕ್ಕೆ ಹೆಜ್ಜೆಯನ್ನು ಇಟ್ಟಿದೆ.

ಈ ನಿಟ್ಟಿನಲ್ಲಿ ಹೊಸ- ಹೊಸ ಯೋಚನೆ ಹಾಗೂ ಯೋಜನೆಯ ಜೊತೆಗೆ ಸಮಾಲೋಚನಾ ಸಭೆಯನ್ನು ನಡೆಸಲಾಯಿತು. ಶತಮಾನೋತ್ಸವ ಕಾರ್ಯಕ್ರಮವನ್ನು 5 ದಿನಗಳ ಕಾಲ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು ಜೊತೆಗೆ ಸಜೀಪಮೂಡ ಶಾಲೆಗೆ ದೊಡ್ಡಮಟ್ಟದಲ್ಲಿ ಏನಾದರೂ ಕೊಡುಗೆಯನ್ನು ನೀಡಬೇಕೆಂದು ಸಭೆಯಲ್ಲಿ ಚರ್ಚೆಯನ್ನು ಕೂಡ ಮಾಡಲಾಯಿತು. ಜೊತೆಗೆ ಶತಮಾನೋತ್ಸವದ ನಿಮಿತ್ತ ಹೊರೆಕಾಣಿಕೆ ಹಾಗೂ ವಿಜೃಂಭಣೆಯ ಶೋಭಯಾತ್ರೆಯನ್ನು ನಡೆಸಬೇಕು ಎಂಬ ಚರ್ಚೆಯೂ ಈ ಸಂದರ್ಭದಲ್ಲಿ ನಡೆಸಲಾಯಿತು.
ಇನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವಕರೂ ಹಾಗೂ ಉದ್ಯಮಿಗಳೂ ಆಗಿರುವ ನಗ್ರಿಗುತ್ತು ವಿವೇಕ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಇನ್ನು ಸಭೆಯಲ್ಲಿ ಶ್ರೀ ದೇವಿಪ್ರಸಾದ್ ಪೂಂಜಾ,ಶ್ರೀಕಾಂತ್ ಶೆಟ್ಟಿ ಸಂಕೇಶ,ಶಿವಪ್ರಸಾದ್ ಶೆಟ್ಟಿ, ಗಿರೀಶ್ ಪೆರ್ವ, ನವೀನ್ ಆಳ್ವಾ ಯೋಗಿಶ್ ಬೆಳ್ಚಾಡ, ಪ್ರಹ್ಲಾದ್ ಹಾಗೂ ಕಿಶೋರ್ , ಪುಶ್ಪಲತಾ,ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.