ಬಂಟ್ವಾಳ,ನ. 28 (DaijiworldNews/ TA): ಸರಪಾಡಿ ನಿವಾಸಿ, ಸರಪಾಡಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತೀಶ್ ಪೈ(56) ಅವರು ನ. 26ರಂದು ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಸರಪಾಡಿಯಲ್ಲಿ ದಿನಸಿ ಅಂಗಡಿಯನ್ನು ಹೊಂದಿದ್ದ ಅವರು ಪತ್ರಿಕಾ ವಿತರಕರಾಗಿದ್ದರು. ಸಾಮಾಜಿಕ ಕ್ಷೇತ್ರ ಸಕ್ರೀಯರಾಗಿದ್ದು, ಕ್ರೀಡಾಪಟುವಾಗಿದ್ದ ಅವರು ವಿವಿಧ ಕ್ರೀಡೆಗಳ ಸಂಘಟಕರಾಗಿ, ಹವ್ಯಾಸಿ ಕಲಾವಿದರಾಗಿ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು.