ಉಡುಪಿ, ನ. 28 (DaijiworldNews/ AK):ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಆಯೋಜಿಸಲಾದ ಭವ್ಯ ಲಕ್ಷ ಕಾಂತ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆ 11 ಗಂಟೆಗೆ ಉಡುಪಿಗೆ ಆಗಮಿಸಿದರು.







ಉಡುಪಿ ಹೆಲಿಪ್ಯಾಡ್ನಲ್ಲಿ ಇಳಿದ ನಂತರ, ಪ್ರಧಾನಿ ಮೋದಿ ಆದಿ ಉಡುಪಿಯಿಂದ ಭವ್ಯ ರೋಡ್ ಶೋ ಮೂಲಕ ಉಡುಪಿ ಶ್ರೀ ಕೃಷ್ಣ ಮಠದ ಕಡೆಗೆ ತೆರಳಿ, ಬನ್ನಂಜೆ, ಉಡುಪಿ ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮೂಲಕ ಹಾದು ಅಂತಿಮವಾಗಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶವನ್ನು ತಲುಪಿದರು.
ಈ ರೋಡ್ ಶೋನಲ್ಲಿ ಅಭಿಮಾನಿಗಳು ಮೋದಿಗೆ ಹೂಮಳೆಯನ್ನೆ ಸುರಿಸಿದರು ಮೋದಿಯನ್ನು ನೋಡಲು ಜನಸಾಗರವೇ ಅಗಮಿಸಿತ್ತು. ಯಕ್ಷಗಾನ, ಹುಲಿ ನೃತ್ಯ (ಪಿಲಿ ವೇಷ) ಸೇರಿದಂತೆ ತುಳುನಾಡಿನ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳು ಮತ್ತು ಶ್ರೀಕೃಷ್ಣನ ವೇಷ ಧರಿಸಿದ ಕಲಾವಿದರು ಮಾರ್ಗದುದ್ದಕ್ಕೂ ನೆರೆದಿದ್ದ ಜನರನ್ನು ಮೋಡಿ ಮಾಡಿದರು.
ಬಳಿಕ ಪ್ರಧಾನಮಂತ್ರಿ ಮೋದಿ ಅವರು ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಐತಿಹಾಸಿಕ ಲಕ್ಷ ಕಾಂತ ಗೀತಾ ಪಾರಾಯಣ, ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.