ಕಾಸರಗೋಡು, ಡಿ. 02 (DaijiworldNews/AK): ಆಟೋ ರಿಕ್ಷಾ ಚಾಲಕನ ಹೆಗಲ ಮೇಲೆ ಗೂಬೆಯೊಂದು ಹಾರಿ ಬಂದು ಕುಳಿತ ಘಟನೆ ಚಟ್ಟಂಚಾಲ್ - ದೇಳಿ ರಸ್ತೆಯ ಬೆಂಡಿಚ್ಚಾಲ್ ಎಂಬಲ್ಲಿ ನಡೆದಿದ್ದು, ನಿಯಂತ್ರಣ ತಪ್ಪಿದ ಅಟೋ ರಿಕ್ಷಾ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಚಾಲಕ ಗಾಯಗೊಂಡಿದ್ದಾರೆ.

ಚಾಲಕ ತಳಂಗರೆಯ ಯೂಸುಫ್ (50) ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಡಿಚ್ಚಾಲ್ ಗೆ ಬಾಡಿಗೆಗೆ ತೆರಳಿ ಕಾಸರಗೋಡಿಗೆ ಮರಳುತ್ತಿದ್ದಾಗ ಎಲ್ಲಿಂದಲೋ ಹಾರಿ ಬಂದ ಗೂಬೆ ಯೂಸುಫ್ ರ ಹೆಗಲ ಮೇಲೆ ಕುಳಿತಾಗ ದಿಗ್ಭ್ರಮೆ ಗೊಂಡು ಅಟೋ ನಿಯಂತ್ರಣ ತಪ್ಪಿ ಈ ಅನಾಹುತ ಉಂಟಾಗಿದೆ. ರಿಕ್ಷಾದ ಮುಂಭಾಗ ನಜ್ಜು ಗುಜ್ಜಾಗಿದೆ.