ಮಂಗಳೂರು,ಡಿ. 03 (DaijiworldNews/AK): ಗಾಂಧಿ ನಗರದ ಎಂಟನೆಯ ಅಡ್ಡ ರಸ್ತೆಯಲ್ಲಿ ನಾರಾಯಣ ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.



ಸುರೇಖ ಪೈ ಮಾಲೀಕತ್ವದ ವಸತಿನಿಲಯವಾಗಿದ್ದು, ಲಕ್ಷಾಂತರ ರೂಪಾಯಿಗಳು ನಷ್ಟವಾಗಿದೆ. ಸುಮಾರು ಒಂದು ಘಂಟೆಗಳ ಕಾಲ ಬೆಂಕಿನಂದಿಸುವ ಕಾರ್ಯಚರಣೆಯಲ್ಲಿ ಅಗ್ನಿ ಶಾಮಕದಳ ತೊಡಗಿಕೊಂಡರು. ಆದರೆ ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..