ಉಡುಪಿ, ಡಿ. 03 (DaijiworldNews/TA): ಮಣಿಪಾಲದ ಪೆರಂಪಳ್ಳಿ ಸಮೀಪದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ದಿನನಿತ್ಯ ಬೈಕ್,,ಕಾರು,,ಆಂಬ್ಯುಲೆನ್ಸ್ ಸೇರಿದಂತೆ ಅನೇಕ ವಾಹನಗಳು ಚಲಾಯಿಸುತ್ತದೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳು ಹಾಳಾಗಿ ಹೊಂಡ ಗುಂಡಿಗಳಿಂದ ನಿರ್ಮಾಣವಾಗಿತ್ತು. ಮಳೆಗಾಲ ಮುಗಿದ ಬಳಿಕವು ರಸ್ತೆಯನ್ನು ಸರಿಪಡಿಸದೇ ಇರುವುದು ಇಲ್ಲಿನ ಸ್ಥಳಿಯರಲ್ಲಿ ಬೇಸರ ವ್ಯಕ್ತವಾಗಿದೆ.
ರಸ್ತೆಗಳನ್ನು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳಾಗಲಿ,,ಇಲಾಖೆಯವರಾಗಲಿ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಿ ಎಂಬುದು ಸ್ಥಳಿಯರ ಆಗ್ರಹವಾಗಿದೆ.