ಕಾರ್ಕಳ, ಡಿ. 03 (DaijiworldNews/AA): ಬುಧವಾರ ಸಂಜೆ ವೇಳೆಗೆ ಸುರಿದ ಅಕಾಲಿಕ ಮಳೆಗೆ ಕರ್ಮರ್ ಮರವೊಂದು ಮುರಿದು ರಿಕ್ಷಾದ ಮೇಲೆ ಬಿದ್ದ ಪರಿಣಾಮ ರಿಕ್ಷಾ ಚಾಲಕ ಸಹಿತ ನಾಲ್ವರು ಮಂದಿ ಗಾಯಗೊಂಡ ಘಟನೆ ಸಂಭವಿದಿದೆ.



ತೆಳ್ಳಾರಿನ ಉದಯಪೂಜಾರಿ ತನ್ನ ರಿಕ್ಷಾದಲ್ಲಿ ಮನೆ ಮಂದಿಯೊಂದಿಗೆ ತೆಳ್ಳಾರಿಗೆ ಹೋಗುತ್ತಿದ್ದಾಗ ರಾಘವೇಂದ್ರ ಮಠಕ್ಕೆ ಸೇರಿದ ಕರ್ಮರ್ ಮರ ಮರಿದು ವಿದ್ಯುತ್ ತಂತಿಯ ಮೇಲೆ ಬಿತ್ತು. ಆ ಸಂದರ್ಭದಲ್ಲಿ ವಿದ್ಯುತ್ ಕಂಬ ಸಹಿತ ಮರ ರಸ್ತೆಗೆ ಉರುಳಿಬಿದ್ದಿದ್ದು, ಅದೇ ಮಾರ್ಗವಾಗಿ ಹೋಗುತ್ತಿದ್ದ ರಿಕ್ಷಾ ಜಖಂ ಗೊಂಡಿರುತ್ತದೆ.
ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಹಾಗೂ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಿತ್ತು. ಗಾಯಗಳುಗಳನ್ನು ಕಾರ್ಕಳದ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.