ಕಾಸರಗೋಡು, ಡಿ. 04 (DaijiworldNews/ AK):ಫೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪರಾರಿಯಾದ ಘಟನೆ ಬುಧವಾರ ಕಾಸರಗೋಡಿನಲ್ಲಿ ನಡೆದಿದ್ದು, ಗಂಟೆಗಳ ಬಳಿಕ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆಕ್ರಾಜೆ ಕೊರೆಕ್ಕಾನದ ಅಶ್ವಥ್ ( 19) ಪರಾರಿಯಾಗಿದ್ದ ಆರೋಪಿ. ಪರಾರಿಯಾದ ಬಳಿಕ ಈತ ನಗರದ ಅನೆಬಾಗಿಲು ಎಂಬಲ್ಲಿ ನ ಪೊದೆಯೊಂದರಲ್ಲಿ ಅವಿತುಕೊಂಡಿದ್ದು , ಪೊಲೀಸರು ಶೋಧ ನಡೆಸಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಸರಗೋಡು ನಗರ ಠಾಣೆ ಯಿಂದ ಪರಾರಿಯಾಗಿದ್ದನು. ಫೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿಚಾರಣೆಗೆ ಕಾಸರಗೋಡು ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್ ಠಾಣೆಗೆ ಕರೆದು ಕೊಂಡು ಬಂದ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು. ಕೂಡಲೇ ಪೊಲೀಸರು ಹುಡುಕಾಟ ನಡೆಸಿದ್ದು, ಸಂಜೆ ಆನೆಬಾಗಿಲು ಎಂಬಲ್ಲಿ ಪೊದೆಯಲ್ಲಿ ಅವಿತುಕೊಂಡಿದ್ದ ಈತನನ್ನು ಬಂಧಿಸಲಾಯಿತು.