ಮಂಗಳೂರು, ಡಿ. 15 (DaijiworldNews/AK): ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ನಿಂದ ಹೊಗೆ ಕಾಣಿಸಿಕೊಂಡ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ರಸ್ತೆಯ ಮಧ್ಯದಲ್ಲೇ ಹೊಗೆ ಹೊರಬರುತ್ತಿದ್ದ ಬಸ್ಸನ್ನು ಕಂಡ ಜನರು, “ಸರ್ಕಾರಿ ಬಸ್ಗಳಿಗೆ ಎಮಿಷನ್ ಟೆಸ್ಟ್ ಇಲ್ವಾ?” ಎಂಬ ಪ್ರಶ್ನೆ ಎತ್ತಿದ್ದಾರೆ. ಇದು ಬೇರೆಲ್ಲೂ ಅಲ್ಲ ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬಂದ ದೃಶ್ಯ.
ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ನಿಂದ ಏಕಾಏಕಿ ಗಾಢವಾದ ಹೊಗೆ ಹೊರಬಂದಿದೆ. ಬಸ್ ನ ತಾಂತ್ರಿಕ ದೋಷವೇ ಈ ಹೊಗೆಗೆ ಕಾರಣವೋ, ಅಥವಾ ಎಮಿಷನ್ ನಿಯಮಗಳ ಉಲ್ಲಂಘನೆಯೋ ಎಂಬ ಅನುಮಾನಗಳು ಮೂಡಿವೆ. ಆದರೆ, “ಖಾಸಗಿ ವಾಹನಗಳಿಗೆ ಕಡ್ಡಾಯವಾಗಿರುವ ಎಮಿಷನ್ ಟೆಸ್ಟ್ ಸರ್ಕಾರಿ ಬಸ್ಗಳಿಗೆ ಅನ್ವಯವಾಗುವುದಿಲ್ಲವೇ?” “ನಿಯಮಗಳು ಎಲ್ಲರಿಗೂ ಸಮಾನವಾಗಬೇಕಲ್ಲವೇ?” ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.