ಬಂಟ್ವಾಳ, ಡಿ. 15 (DaijiworldNews/AK):ಮದುವೆಯ ತಯಾರಿಯಲ್ಲಿದ್ದ ಮನೆಯಿಂದ ಮದುಮಗಳು ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ನಡೆದಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶ್ಪಿಯ ( 21) ನಾಪತ್ತೆಯಾದ ಯುವತಿಯಾಗಿದ್ದಾಳೆ.

ಡಿ.14 ರಂದು ಅಶ್ಪಿಯಳನ್ನು . ಬಿ ಮೂಡ ಗ್ರಾಮದ ಬಂಟ್ವಾಳದ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ಮಾಡಿ ಯುನಿಟಿ ಹಾಲ್ ಅಲ್ಲಿ ಮದುವೆ ನಿಶ್ಷಯಿಸಿರುತ್ತಾರೆ. ಡಿ. 14 ರಂದು ಬೆಳಗ್ಗೆ ಸುಮಾರು 03:30 ಗಂಟೆ ತನಕ ಮನೆಯಲ್ಲೇ ಮಲಗಿದ್ದು ಆ ಬಳಿಕ ಬೆಳಿಗ್ಗೆ ಸುಮಾರು 04:30 ಗಂಟೆಗೆ ಬೆಳಗಿನ ಜಾವ ನೋಡಿದಾಗ ಅಕ್ಕನ ಮನೆಯಲ್ಲಿ ಇಲ್ಲದೇ ಇರುವುದು ತಿಳಿದು ಬಂದಿದೆ. ಬಳಿಕ ಎಲ್ಲ ಕಡೆ ಹುಡುಕಾಡಿದರು ಸಿಗದೇ ಇರುವುದರಿದ ಈ ವೇಳೆಗೆ ತಡವಾಗಿ ಬಂದು ದೂರು ನೀಡುತ್ತಿರುವುದಾಗಿದೆ ಎಂದು ತಿಳಿಸಿದ್ದಾರೆ.
ದೂರುದಾರರ ಅಕ್ಕ ಅಶ್ಪಿಯ ಎಂಬವಳನ್ನು ಹುಡುಕಿ ಕೊಡಬೇಕಾಗಿ ವೃತ್ತಿಯಲ್ಲಿ ಚಾಲಕನಾಗಿರುವ ಅರ್ಶದ್ ಎಂಬವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.