ಕಾಸರಗೋಡು, ಡಿ. 16 (DaijiworldNews/AK):ಗ್ಯಾಸ್ ಸ್ಟವ್ ನಿಂದ ಬೆಂಕಿ ತಗಲಿ ಮನೆ ಸಂಪೂರ್ಣ ಅಗ್ನಿಗಾಹುತಿಯಾದ ಘಟನೆ ಕೊಳ್ಕಬೈಲ್ ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ.





ಪುಷ್ಪಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ . ಪುಷ್ಪಾ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಟೌವ್ ಬೆಂಕಿ ಮನೆಗೆ ತಗುಲಿದ್ದು, ಪುಷ್ಪಾ ಹೊರಗಡೆ ಓಡಿದ್ದರಿಂದ ಅಪಾಯ ತಪ್ಪಿದೆ. ಬೆಂಕಿ ಸಮೀಪದಲ್ಲಿದ್ದ ವಸ್ತು ಹಾಗೂ ವಸ್ತ್ರಕ್ಕೆ ತಗಲಿ ಬಳಿಕ ಮನೆಗೆ ಹರಡಿದ್ದು, ಮಾಹಿತಿ ತಿಳಿದು ಕಾಸರಗೋ ಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.
ನಾಲ್ಕು ಕೋಣೆಯ ಹಂಚು ಹಾಸಿದ ಮನೆಯಲ್ಲಿ ಪುಷ್ಪಾ ಸೇರಿದಂತೆ 9 ಮಂದಿ ವಾಸವಾಗಿದ್ದು, ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಪುಷ್ಪಾ ಮಾತ್ರ ಇದ್ದರು . ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಅಗ್ನಿ ಗಾಹುತಿಯಾಗಿದೆ . ಸುಮಾರು 10 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.