ಬಂಟ್ವಾಳ, ಡಿ. 25 (DaijiworldNews/TA): ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾವನ್ನು ಬಂಟ್ವಾಳ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ರಾಮಲ್ ಕಟ್ಟೆ ನಿವಾಸಿ ಉಸ್ಮಾನ್ ಎಂಬವರ ಸ್ಕೂಟರ್ ಗೆ ಅಪರಿಚಿತ ರಿಕ್ಷಾ ಡಿಕ್ಕಿ ಹೊಡೆದು ಬಳಿಕ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಆದರೆ ಎರಡು ಹಿಟ್ ರನ್ ಆಗಿದ್ದ ರಿಕ್ಷಾ ಪತ್ತೆಯಾಗಿರಲಿಲ್ಲ.
ರಿಕ್ಷಾ ಡಿಕ್ಕಿಯಾಗಿ ಪರಾರಿಯಾಗಿರುವುದನ್ನು ಅಲ್ಲಿನ ಸ್ಥಳೀಯರು ನೋಡಿದ್ದಲ್ಲದೆ, ಸಿ.ಸಿ.ಕ್ಯಾಮರಾದಲ್ಲಿ ಕೂಡ ಸೆರೆಯಾಗಿತ್ತು. ಸಿ.ಸಿ.ಕ್ಯಾಮರಾದ ಸಾಕ್ಷ್ಯವನ್ನು ಆಧರಿಸಿ ಬೆನ್ನು ಹತ್ತಿದ ಟ್ರಾಫಿಕ್ ಪೋಲೀಸರು ಬುಧವಾರ ಮಂಗಳೂರಿನಲ್ಲಿ ರಿಕ್ಷಾವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡರು. ಸಜೀಪ ನಿವಾಸಿ ಕುಮರೇಶ್ ಅವರನ್ನು ಪೊಲೀಸರು ಪತ್ತೆ ಹಚ್ಚಿ ರಿಕ್ಷಾವನ್ಬು ವಶಪಡಿಸಿಕೊಂಡಿದ್ದಾರೆ.