ಮಂಗಳೂರು, ಡಿ. 25 (DaijiworldNews/TA): ಮಂಗಳೂರಿನ ವೆಲೆನ್ಸಿಯಾ ಪ್ರದೇಶದಲ್ಲಿರುವ ರಿಟ್ರೀಟ್ ಹೌಸ್ ಸಮೀಪ ಗುರುವಾರ ಮುಂಜಾನೆ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ.








ಮೂಲಗಳ ಪ್ರಕಾರ, ನಂದಿಗುಡ್ಡ ಕಡೆಯಿಂದ ಕಂಕನಾಡಿ ಕಡೆಗೆ ತೆರಳುತ್ತಿದ್ದ ಕಾರು ಬೆಳಿಗ್ಗೆ ಸುಮಾರು 6.45ರ ವೇಳೆಗೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಪಲ್ಟಿಯಾಗಿ ರಸ್ತೆ ಮಧ್ಯೆ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣ ಸಾರ್ವಜನಿಕರು ಧಾವಿಸಿ ಕಾರನ್ನು ಸರಿಯಾಗಿ ತಿರುಗಿಸಿ ನಿಲ್ಲಿಸಲು ಸಹಾಯ ಮಾಡಿದರು. ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಅದಾಗ್ಯೂ ಅಪಘಾತದ ಬಳಿಕ ಚಾಲಕ ಸ್ಥಳದಿಂದ ಹೊರಟುಹೋಗಿದ್ಧಾನೆ ಎನ್ನಲಾಗಿದೆ. 112 ತುರ್ತು ಸಹಾಯವಾಣಿಗೆ ಮಾಹಿತಿ ಬಂದ ಸುಮಾರು 15 ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.