ಕಾರ್ಕಳ, ಡಿ. 25 (DaijiworldNews/AK): ಡಿಸೆಂಬರ್ 24ರಂದು ಅತ್ತೂರಿನ ಸೆಂಟ್ ಲಾರೆನ್ಸ್ ಬಸಿಲಿಕಾ ಧಾರ್ಮಿಕ ಕೇಂದ್ರದಲ್ಲಿ ಕ್ರಿಸ್ಮಸ್ ಹಬ್ಬವನ್ನು ಭಕ್ತಿಭಾವ ಮತ್ತು ಸಂತೋಷದಿಂದ ಆಚರಿಸಲಾಯಿತು.








ಸಂಜೆ ಅತ್ತೂರು ಗಾಯನ ಮಂಡಳಿಯವರ ಕ್ರಿಸ್ಮಸ್ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಪವಿತ್ರ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಶಿಕ್ಷಣ ನಿರ್ದೇಶಕರಾದ ವಂದನಿಯ ಫಾ. ಜಿತೇಶ್ ಕ್ಯಾಸ್ಟೆಲಿನೋ ಅವರು ನೆರವೇರಿಸಿದರು. ತಮ್ಮ ಸಂದೇಶದಲ್ಲಿ ಅವರು ಕ್ರಿಸ್ಮಸ್ನ ನಿಜವಾದ ಅರ್ಥವನ್ನು ವಿವರಿಸಿದರು.
ಪವಿತ್ರ ಬಲಿ ಅರ್ಪಣೆಯ ಸಮಯದಲ್ಲಿ 2026ನೇ ಸಾಲಿನ ಐಸಿವೈಎಂ (ICYM) ಸಂಘಟನೆಯ ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿ, ಪಾರಿಷ್ ಹಾಗೂ ಯುವಜನ ಸೇವೆಗೆ ನಿಷ್ಠೆಯಿಂದ ಸೇವೆ ಸಲ್ಲಿಸುವುದಾಗಿ ಬದ್ಧತೆ ವ್ಯಕ್ತಪಡಿಸಿದರು. ಪವಿತ್ರ ಬಲಿಯ ನಂತರ ವೈಸಿಎಸ್ (YCS) ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಂತರ ಐಸಿವೈಎಂ ವತಿಯಿಂದ ಕೇಕ್ ಹರಾಜು ನಡೆಯಿತು. ಧರ್ಮಗುರುಗಳಾದ ಅತೀ ವಂದನಿಯ ಫಾ. ಅಲ್ಬನ್ ಡಿಸೋಜಾ, ವಂದನಿಯ ಫಾ. ರೊಬಿನ್ ಸಾಂತುಮಾಯೆರ್, ವಂದನಿಯ ಫಾ. ರೋಮನ್ ಮಸ್ಕರೇನ್ಹಾಸ್ ಹಾಗೂ ವಂದನಿಯ ಫಾ. ಆಂಟನಿ ವಾಜ್ ಅವರು ಈ ಸಂದರ್ಭ ಉಪಸ್ಥಿತರಿದ್ದರು.