ಉಡುಪಿ, ಜ. 26 (DaijiworldNews/TA): ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದಿ ಒರಿಜಿನಲ್ ಆಭರಣ ಉಡುಪಿ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಉಡುಪಿಯ 13 ಮಂದಿ ಪೌರ ಕಾರ್ಮಿಕರನ್ನು ಸೋಮವಾರ ಸಂಸ್ಥೆಯ ಬೆಳ್ಳಿ ವಿಭಾಗದಲ್ಲಿ ಗೌರವದಿಂದ ಸನ್ಮಾನಿಸಲಾಯಿತು.

ಉಡುಪಿ ನಗರಸಭೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸದ್ಯ ಕರ್ತವ್ಯದಿಂದ ನಿವೃತ್ತರಾಗಿರುವ ಪೌರಕಾರ್ಮಿಕರಾದ ರಾಜು, ರಾಮ, ಸುರೇಶ್ ಹಾಗೂ ಪ್ರಸ್ತುತ ಕರ್ತವ್ಯದಲ್ಲಿರುವ ರಮೇಶ್ ನಾಯ್ಕ್, ಕೆ. ಚಂದ್ರ, ಪ್ರಭಾಕರ್, ಜ್ಯೋತಿಮ್ಮ, ಎಂ. ದುರ್ಗಾಪ್ಪ, ಕೆ. ದಂಡಪ್ಪ, ಪ್ರಭಾಕರ, ಪದ್ಮನಾಭ, ಪಿ. ಶಂಕರ್ ಹಾಗೂ ಶಂಕರ್ ಅವರನ್ನು ಸಂಸ್ಥೆಯ ನಿರ್ದೇಶಕರಾದ ಸುಭಾಸ್ ಎಂ. ಕಾಮತ್, ಮಹೇಶ್ ಎಂ. ಕಾಮತ್ ಅವರು ಸನ್ಮಾನಿಸಿದರು.
ಸಂಸ್ಥೆಯ ಲೆಕ್ಕಪತ್ರ ವಿಭಾಗ ಮುಖ್ಯಸ್ಥ ವಿನೋದ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ನಗರದ ಶುಚಿತ್ವ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ತರವಾಗಿದೆ. ಉಡುಪಿಯನ್ನು ಸದಾ ಕಂಗೊಳಿಸುವಂತೆ ಮಾಡುವ ಪೌರಕಾರ್ಮಿಕರನ್ನು ಗೌರವ ಅಮೂಲ್ಯ ಕ್ಷಣ ಸಂಸ್ಥೆಗೆ ಸಿಕ್ಕಿರುವುದು ಖುಷಿಯ ಕ್ಷಣ. ಇವರು ಸ್ವಚ್ಛತಾ ಸೇನಾನಿಗಳೆಂದು ತಿಳಿಸಿದರು.
ಆಭರಣ ಸಂಸ್ಥೆಯ ಗೋಲ್ಡ್ ವಿಭಾಗದ ಮುಖ್ಯಸ್ಥ ಮುರುಳೀಧರ್ ಆಚಾರ್ಯ, ಬೆಳ್ಳಿ ವಿಭಾಗದ ಮುಖ್ಯಸ್ಥ ಸಲೀಂ, ಸ್ವಾತಿ, ಮಾರುಕಟ್ಟೆ ವಿಭಾಗ ಮುಖ್ಯಸ್ಥ ದಿನೇಶ್ ಶೆಟ್ಟಿಗಾರ್, ರೂಪೇಶ್, ಪ್ರದೀಪ್, ಪ್ರಶಾಂತ್, ಸುದರ್ಶನ್, ಶೈಲೇಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.