ಸುಳ್ಯ, ಜ. 27 (DaijiworldNews/TA): ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳು ಸಂವಿಧಾನದ ಮೂಲಕ ಸಾಕಾರಗೊಂಡಿದೆ. ದೇಶದ ಸಂವಿಧಾನದ ಮೌಲ್ಯಗಳನ್ನು ಅರಿತು ನಾವೆಲ್ಲರೂ ನಡೆಯಬೇಕು. ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕು” ಎಂದು ಸುಳ್ಯ ತಹಶೀಲ್ದಾರ್ ಮಂಜುಳ ಹೇಳಿದರು.

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. "ಈ ದೇಶದ ಸಂವಿಧಾನದಡಿಯಲ್ಲಿ ನಾವೆಲ್ಲರೂ ನಡೆಯುತಿದ್ದೇವೆ. ಗೌರವಿಸುತಿದ್ದೇವೆ. ಸಂವಿಧಾನ ಬಂದುದರಿಂದ ನಾನು ಶಾಸಕಿ ಆಗುವಂತಾಯಿತು. ಹಲವರಿಗೆ ಉನ್ನತ ಅವಕಾಶಗಳು ದೊರೆತಿದೆ" ಎಂದು ಹೇಳಿದರು.