ಕಾಸರಗೋಡು, ಜ. 27 (DaijiworldNews/TA): ನಗರದಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಅರಣ್ಯ ಮತ್ತು ವನ್ಯಜೀವಿ ಇಲಾಖಾ ಸಚಿವ ಎ. ಕೆ. ಶಶೀಂದ್ರನ್ ಕಾಸರಗೋಡಿನ ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂನಲ್ಲಿ ಧ್ವಜಾರೋಹಣಗೖದರು. ಜಿಲ್ಲಾ ವರಿಷ್ಠಾಧಿಕಾರಿ ವಿಜಯ ಭರತ್ ರೆಡ್ಡಿ, ಉಸ್ತುವಾರಿ ಜಿಲ್ಲಾಧಿಕಾರಿ ಎಡಿಎಂ ಪಿ. ಅಖಿಲ್ ಪೆರೇಡ್ ನಲ್ಲಿ ಧ್ವಜವಂದನೆ ಸಲ್ಲಿಸಿದರು.

ಪೆರೇಡ್ ಗೆ ಒಂದನೇ ಕಮಾಂಡೆಂಟ್ ಆಗಿ ಶಿವಂ ಐಪಿಎಸ್, ಎರಡನೇ ಕಮಾಡೆಂಟಾಗಿ ಕಾಸರಗೋಡು ಸ್ಪೆಷಲ್ ಬ್ರಾಂಚ್ ಸಬ್ ಇನ್ಸ್ಪೆಕ್ಟರ್ ಎಂ. ಸದಾಶಿವನ್ ನೇತೃತ್ವ ನೀಡಿದರು. ಜಿಲ್ಲೆಯ ವಿವಿಧ ಶಾಲಾ ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಸಂಸದ ರಾಜಮೋಹನ ಉಣ್ಣಿತ್ತಾನ್, ಶಾಸಕರಾದ ಎನ್. ಎ. ನೆಲ್ಲಿಕುನ್ನ್, ಇ. ಚಂದ್ರಶೇಖರನ್, ಸಿ. ಎಚ್. ಕುಂಞಂಬು, ಎ. ಕೆ. ಎಂ. ಅಶ್ರಫ್, ಜಿ. ಪಂ. ಅಧ್ಯಕ್ಷ ಸಾಬು ಅಬ್ರಹಾಂ, ಉಪಾಧ್ಯಕ್ಷೆ ಕೆ. ಕೆ. ಸೋಯ, ಸೇರಿದಂತೆ ಪ್ರಮುಖರು ಪಾಲ್ಗೊಂಡರು.