ಮಂಗಳೂರು, ಜ. 27 (DaijiworldNews/AK):ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಮಂಗಳೂರು ತಾಲೂಕು ಘಟಕ ಹಾಗೂ ಶ್ರೀ ಸತ್ಯ ಸಾರಮಾಣಿ ದೈವಸ್ಥಾನ ಸಮಿತಿವಿವೇಕನಗರ, ಬಳ್ಳಾಲ್ ಬಾಗ್ ಇದರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರು, ರಾಜ್ಯ ಗೌರವಾಧ್ಯಕ್ಷರಾದ ದಿll ಶಿವಾನಂದ ಬಳ್ಳಾಲ್ ಬಾಗ್ ಇವರ ನುಡಿ ನಮನ ಕಾರ್ಯಕ್ರಮವು ಇಂದು ಬಳ್ಳಾಲ್ ಬಾಗ್ ವಿವೇಕನಗರದ ಡಾ" ಬಿ. ಆರ್.ಅಂಬೇಡ್ಕರ್ ಭವನದಲ್ಲಿ ಜರಗಿತು. ಯೋಗೇಶ್ ಕೆ. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಬಿ ಸಾಲ್ಯಯಾನ್ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು. ಶ್ರೀಮತಿ ಸುಮಂಗಳ ಇವರು ಶಿವನಂದ ಬಳ್ಳಾಲ್ ಬಾಗ್ ಇವರು ನಡೆದು ಬಂದ ಹಾದಿ ಹಾಗೂ ಸಾಧನೆಗಳನ್ನು ಕೆಲಸ ಕಾರ್ಯಗಳನ್ನು ಪ್ರಾಸ್ತವಿಕವಾಗಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಸನ್ಮಾನ್ಯ ಶ್ರೀ ಐವನ್ ಡಿಸೋಜ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ತನಿಯಪ್ಪ ಪಡ್ಡಾಯೂರು, ರಾಜ್ಯ ವಕ್ತರರು ಪ್ರೇಮ್ ನಾಥ್ ಪಿ.ಬಿ, ಜಿಲ್ಲಾಧ್ಯಕ್ಷರು ಶ್ರೀನಿವಾಸ್ ಆರ್ಬಿಗುಡ್ಡೆ, ಮಾಜಿ ಉಪಾಧ್ಯಕ್ಷರು ಸುರೇಶ್ ಕೆ., ಸುಳ್ಯ ತಾಲೂಕಿನ ಗೌರವಾಧ್ಯಕ್ಷರು ಬಾಬು ಜಾಲ್ಸುರು, ಮಂಗಳೂರು ತಾಲೂಕು ಅಧ್ಯಕ್ಷರು ಸುನೀಲ್ ಕಂಕನಾಡಿ, ಶ್ರೀ ಸತ್ಯ ಸಾರಮಾಣಿ ದೈವಸ್ಥಾನ ಸಮಿತಿಯ ಅಧ್ಯಕ್ಷರು ರಾಜೇಶ್ ಮುಚ್ಚೂರು, ಅಯ್ಯಪ್ಪ ಸ್ವಾಮಿ ಭಕ್ತ ಸೇವಾ ಸಮಿತಿಯ ಅಧ್ಯಕ್ಷರು ಎಂ.ಸಂಜೀವ,ಹಿರಿಯ ಆದಿದ್ರಾವಿಡ ಮುಖಂಡರು ಕಾಂತಪ್ಪ ಅಲಂಗಾರ್, ಅಲೇರಿ ಶ್ರೀ ಸತ್ಯ ಸಾರಮಾನಿ ಮೂಲ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಕಂಕನಾಡಿ. ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ದಿನೇಶ್ ಮೂಳೂರು, ಆದಿದ್ರಾವಿಡ ಮುಖಂಡರಾದ ಎನ್. ಕೆ ಬಾಬು,ಎಂ.ರಾಧಕೃಷ್ಣ ಲೋಕಯ್ಯ ಸಿದ್ದಗಟ್ಟೆ, ಗಿರಿಯಪ್ಪ ಬಂಟ್ವಾಳ, ವಸಂತ ಮಹಕಾಳಿ ಪಡ್ಫು, ನಾಗೇಶ್, ಸುರೇಶ್ ಸುಂಕದಕಟ್ಟೆ, ಸುಜಾತ, ಭರತ್ ಬಳ್ಳಾಲ್ ಬಾಗ್, ನಿತ್ಯಾನಂದ ಸುಂಕದಕಟ್ಟೆ, ಇನ್ನಿತರರು ಉಪಸ್ಥಿತರಿದ್ದರು.
ರಾಜ್ಯ ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ನವೀನ್ ಡಿ.ವಿ ಅಲಂಗಾರ್, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರೇಮ್ ನಾಥ್ ಪಿ.ಬಿ ಧನ್ಯವಾದ ಸಲ್ಲಿದರು.