ಮಂಗಳೂರು, ಮಾ. 01 (DaijiworldNews/TA): ವಿಮಾನ ನಿಲ್ದಾಣ ರಸ್ತೆಯ ಪದವಿನಂಗಡಿಯಲ್ಲಿ ಶನಿವಾರ ಮಧ್ಯಾಹ್ನ ಬೊಂದೇಲ್ ಕಡೆಗೆ ಸಾಗುತ್ತಿದ್ದ ಜೀಪೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಕುಪ್ಪೆಪದವು ನಿವಾಸಿ ಇಮ್ತಿಯಾಝ್ ಹಸೇನ್ (45) ಮೃತಪಟ್ಟವರು. ಇಮ್ತಿಯಾಝ್ ಹಸೇನ್ ಆನ್ ಲೈನ್ ಡೆಲಿವರಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ. ಘಟನೆಯ ದೃಶ್ಯ ಪಕ್ಕದ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.