ಉಡುಪಿ, ಮಾ. 01 (DaijiworldNews/TA): ಮಣಿಪಾಲ ಆಟೋರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಪ್ಲಾನಿಟೋರಿಯಂ ಬಳಿ ಫೆಬ್ರವರಿ 28ರಂದು ರಿಕ್ಷಾ ನಿಲ್ದಾಣದ ಉದ್ಘಾಟನೆ ನಡೆಯಿತು. ಸಂಘದ ಗೌರವ್ಯಾಧ್ಯಕ್ಷ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಅವರು ಉದ್ಘಾಟಿಸಿದರು.


ಸಂಘದ ಅಧ್ಯಕ್ಷರಾದ ಗಣೇಶ್ ಪ್ರಭು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಿಯಾಜ್, ಉಪಾಧ್ಯಕ್ಷರಾದ ಗುರುದತ್ ಮಲ್ಯ, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಗೌರವ ಸಲಹೆಗಾರರು ಲೋಕೇಶ್ ಪೂಜಾರಿ ವೆಂಕಟೇಶ್ ಶೆಟ್ಟಿಗಾರ್ ಸಂತೋಷ್ ಶೆಟ್ಟಿ, ಸ್ಥಾಪಕ ಸದಸ್ಯರು ಅಶೋಕ್ ಶೆಟ್ಟಿ, ಹಾಗೂ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಮಾಜಿ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಅತಿಥಿಗಳಾಗಿ ಪ್ರಭಾಕರ್ ಪೂಜಾರಿ ಕ್ಲಾಸಿಕ್ ಬಿಲ್ಡರ್ಸ್ ಅಂಬಾಗಿಲು, ಹರ್ಷ ಗ್ರಾಸ್ ಲ್ಯಾಂಡ್ ರಿಯಲ್ ಎಸ್ಟೇಟ್ ಮ್ಯಾನೇಜರ್, ಉಪಸ್ಥಿತರಿದ್ದರು.