ಮಂಗಳೂರು ಮಾ. 01 (DaijiworldNews/ AK): ಎ.6ರಿಂದ 12ರವರೆಗೆ ನಡೆಯುವ ಕಾವೂರಿನ ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಂರ್ಗಿಬೈಲು ಕುಂಜತ್ತ ಬೈಲು ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ರವಿವಾರ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರು ಉತ್ತರದ ಶಾಸಕರು ಡಾ. ಭರತ್ ಶೆಟ್ಟಿ ಅವರು ಭಾಗವಹಿಸಿದರು. ಭಕ್ತಾದಿಗಳು ಆಗಮಿಸಿ ದೇವರ ಸೇವೆ ಮಾಡುವ ಜತೆಗೆ ಬ್ರಹ್ಮ ಕಲಶೋತ್ಸವಕ್ಕೆ ದೇಣಿಗೆ ನೀಡುವ ಮೂಲಕ ಯಶಸ್ಸಿಗೆ ತನು ಮನ ಧನದ ಮೂಲಕ ಕೈ ಜೋಡಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ನಾರಾಯಣ ಮಯ್ಯ ಅವರು ಪ್ರಾರ್ಥಿಸಿ, ಸರ್ವರ ಸಹಕಾರ ಕೋರಿದರು.ಆಡಳಿತ ಮೊಕ್ತೇಸರರಾದ ಡಾ. ನರೇಶ್ ರೈ ಡೆಪ್ಪುಣಿಗುತ್ತು, ಬಹ್ಮಕಲಶೋತ್ಸವ ಅಧ್ಯಕ್ಷ ಶಾಸಕರು ಡಾ. ವೈ ಭಾರತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ವಿಠಲ್ ಆಳ್ವ ಹಳೆಮೊಗರು, ಮೊಕ್ತೇಸರರಾದ ಸದಾಶಿವ ರೈ ನಾರ್ದಬೆಟ್ಟು, ಶೇಖರ್ ಕೋಟ್ಯಾನ್, ಗೋಪಾಲ್ ಬಂಗೇರ,ಜಗದೀಶ್ ಶೆಟ್ಟಿ ,ಕಾರ್ಯಾಧ್ಯಕ್ಷ ಅವಿನಾಶ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್,ದೀಪಕ್ ಪೂಜಾರಿ, ಕೋಶಾಧಿಕಾರಿ ಶಂಭು ಶೆಟ್ಟಿ ಪ್ರಮುಖರಾದ ರಮಾನಂದ ಭಂಡಾರಿ,ದಿವಾಕರ ಪಕ್ಕಳ, ಶಿತೇಶ್ ಕೊಂಡೆ ಮತ್ತು ಸಮಿತಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ರವಿವಾರ ದೇವಸ್ಥಾನದಲ್ಲಿ ಭಕ್ತಾದಿಗಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಕರ ಸೇವೆ ನಡೆಸಿದರು.