ಸುಳ್ಯ, ಮಾ. 02 (DaijiworldNews/TA): ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಧಾಕೃಷ್ಣ ಬೊಳ್ಳೂರುರವರಿಗೆ ಅಮರ ಪಡ್ನೂರು ಗ್ರಾಮದ ಅಭಿಮಾನಿಗಳಿಂದ ಹುಟ್ಟೂರ ಅಭಿನಂದನೆ ಕಾರ್ಯಕ್ರಮ ಫೆ. ೧ರಂದು ಕುಕ್ಕುಜಡ್ಕ ಅಮರ ಸಭಾಭವನದಲ್ಲಿ ನಡೆಯಿತು.

ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ಅಧ್ಯಕ್ಷ ಶ್ರೀನಾಥ್ ನೆಲ್ಲಿಕುಂಜರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಕ್ಕುಜಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಮೂಕಮಲೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಶಶಿಧರ್ ಎಂ ಜೆ ಮೋಂಟಡ್ಕ, ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೇಕಲ್ಲು ಶುಭಹಾರೈಸಿದರು.
ಮುಖ್ಯ ಅತಿಥಿಗಳಾದ ವೆಂಕಟ್ರಮಣ ಗೌಡ ಇಟ್ಟಿಗುಂಡಿ, ಅಣ್ಣಾಜಿ ಗೌಡ ಮಾತನಾಡಿ ಶುಭ ಹಾರೈಸಿದರು. ಅಮರ ಪಡ್ನೂರು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರಾಮಯ್ಯ ರೈ, ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯೆ ಸರೋಜ ಯತೀಶ್ ಹಿರಿಯಡ್ಕ, ಅರೋಗ್ಯ ರಕ್ಷಾ ಸಮಿತಿ ಸದಸ್ಯ ಚಂದ್ರನ್ ಕೂಟೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.