ಮಂಗಳೂರು, ಮಾ. 03 (DaijiworldNews/AA): ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಸಂಚಾರವನ್ನು ಮಾರ್ಚ್ 4ರವರೆಗೆ ರದ್ದುಗೊಳಿಸಲಾಗಿದೆ.

ಮಾರ್ಚ್ 3 ರಂದು ಮಂಗಳೂರು-ದೋಹಾ (IX 821), ದೋಹಾ-ಮಂಗಳೂರು (IX 822), ಮಂಗಳೂರು-ದುಬೈ (IX 813), ಮಂಗಳೂರು-ಕುವೈತ್ (IX 851), ಮಂಗಳೂರು-ದಮ್ಮಾಮ್ (IX 847), ಮತ್ತು ಮಂಗಳೂರು-ಅಬುಧಾಬಿ ವಿಮಾನಗಳನ್ನು ರದ್ದುಗೊಳಿಸಲಾಗಿದೆ
ಅದೇ ರೀತಿ, ಮಾರ್ಚ್ 4 ರಂದು ದುಬೈ-ಮಂಗಳೂರು (IX 814), ಕುವೈತ್-ಮಂಗಳೂರು (IX 852), ದಮ್ಮಾಮ್-ಮಂಗಳೂರು (IX 848), ಮತ್ತು ಅಬುಧಾಬಿ-ಮಂಗಳೂರು (IX 816) ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದುವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸಲು ಯೋಜಿಸಿದ್ದ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.