ಸುಳ್ಯ,ಮಾ. 07 (DaijiworldNews/AK): ಸಂಪಾಜೆ ಗ್ರಾಮದ ಕರುಣಾಕರರವರ ಎಸ್.ಪಿ ಅವರ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿಯನ್ನು ನಾಶಪಡಿಸಿದ ಘಟನೆ ಸಂಪಾಜೆ ಗ್ರಾಮದಲ್ಲಿ ವರದಿಯಾಗಿದೆ.




ಸಂಪಾಜೆ ಗ್ರಾಮದ ಕರುಣಾಕರ ಅವರು ತೋಟ ಎಂದು ತಿಳಿದು ಬಂದಿದೆ. ತೋಟಕ್ಕೆ ದಾಳಿ ನಡೆಸಿದ ಆನೆಗಳು ಅಡಿಕೆ,ತೆಂಗು,ಬಾಳೆ ಇತರ ಬೆಳೆಗಳನ್ನು ನಾಶ ಪಡಿಸಿವೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿದ್ದರು ರೈತರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.