ಸುಳ್ಯ, ಮಾ. 08 (DaijiworldNews/TA): ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ,ಸಮಾಜದಲ್ಲಿ ನಾವು ಸ್ವಾಭಿಮಾನಿಗಳಾಗಿ ಬದುಕಬೇಕು. ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಮಾಜಿ ಸಚಿವ ಅಂಗಾರ ಹೇಳಿದರು.

ಗಾಯಕ ಶಶಿಧರ ಕೋಟೆ ರಚಿಸಿ ಹಾಡಿದ ಧ್ವನಿ ಮುದ್ರಿತ ಭಕ್ತಿ ಗೀತೆಯನ್ನು ಅವರು ಮಾ.7ರಂದು ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯರ್ ಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಜೇನು ಸೊಸೈಟಿಯ ಅಧ್ಯಕ್ಷ ಚಂದ್ರ ಕೋಲ್ಟಾರ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಕಾಂತ್ ಗೋಲ್ವಲ್ಕರ್, ಉದ್ಯಮಿ ಲಕ್ಷ್ಮೀನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಅತಿಥಿಗಳು ತಮ್ಮ ಕೈಲಾದ ಧನ ಸಹಾಯ ಮಾಡುವ ಭರವಸೆ ನೀಡಿ ಶುಭಹಾರೈಸಿದರು.