ಮಂಗಳೂರು, ಮಾ. 08 (DaijiworldNews/TA): ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಮಹಿಳಾ ವಾರ್ಡ್ ಗಳಿಗೆ ಭೇಟಿ ನೀಡಿದರು.


ಈ ವೇಳೆ ಅವರು ಆಸಿಡ್ ಸಂತ್ರಸ್ತೆಯೊಂದಿಗೆ ಮಾತನಾಡಿ ಸಾಂತ್ವನ ಹಾಗೂ ಪರಿಹಾರದ ಬಗ್ಗೆ ಭರವಸೆ ನೀಡಿದರು. ಅಂತಿಮವಾಗಿ ವೆನ್ಲಾಕ್ ನೀಡಿದ ಸೌಲಭ್ಯ ಮತ್ತು ಚಿಕಿತ್ಸೆಯನ್ನು ಶ್ಲಾಘಿಸಿದರು. ನರ್ಸಿಂಗ್ ಅಧಿಕಾರಿಗಳು ನರ್ಸಿಂಗ್ ಸಿಬ್ಬಂದಿ ಕೊರತೆ ಮತ್ತು ಅವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಸಿದಾಗ, ಅಧ್ಯಕ್ಷರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.