ಮಂಗಳೂರು, ಮಾ. 09 (DaijiworldNews/TA): ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅನಿಶ್ಚಿತತೆಯ ವಾತಾವರಣ ಮುಂದುವರೆದಿರುವ ಹಿನ್ನೆಲೆಯಲ್ಲಿ ಮಂಗಳೂರು - ಜಿದ್ದಾ, ಮಂಗಳೂರು- ದುಬೈ ವಿಮಾನಗಳ ಮಾ.9ರ ಯಾನ ರದ್ದಾಗಿದೆ. ಮಾ.9ರಂದು ಬೆಳಗ್ಗೆ 5:20ಕ್ಕೆ ಮುಂಗಳೂರು -ಜಿದ್ದಾ ಮತ್ತು ಸಂಜೆ 6:20ರ ಜಿದ್ದಾ-ಮಂಗಳೂರು, ಮಧ್ಯಾಹ್ನ 1:20ರ ಮಂಗಳೂರು -ದುಬೈ ಮತ್ತು ರಾತ್ರಿ 10:10ರ ದುಬೈ -ಮಂಗಳೂರು ವಿಮಾನಗಳು ರದ್ದಾಗಿದೆ.

ರಾತ್ರಿ 8:15ರ ಮಂಗಳೂರು -ದುಬೈ ಮತ್ತು ಮಾ.10ರಂದು ಸಂಜೆ 4:55ರ ದುಬೈ -ಮಂಗಳೂರು, ಮಾ.9ರಂದು ರಾತ್ರಿ 11:10ರ ಮಂಗಳೂರು -ದಮಾಮ್ ಮತ್ತು ಮಾ.10 ಬೆಳಗ್ಗೆ 9:25ರ ದಮಾಮ್ - ಮಂಗಳೂರು, ಮಾ.9ರಂದು ರಾತ್ರಿ 11:10ರ ಮಂಗಳೂರು - ದುಬೈ ಮತ್ತು ಮಾ.10ರ ಬೆಳಗ್ಗೆ 8:15ರ ದುಬೈ -ಮಂಗಳೂರು ವಿಮಾನಗಳು ರದ್ದಾಗಿವೆ. ಮಾ.9 ರಂದು ಬೆಳಗ್ಗೆ 5:20ರ ದುಬೈ ಮಂಗಳೂರು, ರಾತ್ರಿ 9:15ರ ಮಂಗಳೂರು - ದುಬೈ ವಿಮಾನಗಳು ರದ್ದಾಗಿದೆ ಮತ್ತು ರಾತ್ರಿ 7:35ರ ಬೆಂಗಳೂರು -ಮಂಗಳೂರು ಹೊರಡುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.