ಕಾಸರಗೋಡು, ಮಾ. 11 (DaijiworldNews/AK): ನಗರ ಹೊರವಲಯದ ರಾಷ್ಟೀಯ ಹೆದ್ದಾರಿ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಶವ ಮಂಗಳವಾರ ರಾತ್ರಿ ಪತ್ತೆಯಾಗಿದೆ.

ಕೊಲೆ ಎಂದು ಶಂಕಿಸಲಾಗಿದೆ. ಕಟ್ಟಡದ ಲಿಫ್ಟ್ ಗಾಗಿ ತೆಗೆಯಲಾದ ಹೊಂಡದಲ್ಲಿ ಶವ ಪತ್ತೆಯಾಗಿದೆ. ಕಟ್ಟಡದ ಮೇಲಂತಸ್ತಿ ನಲ್ಲಿ ರಕ್ತದ ಕಲೆಗಳು ಕಂಡುಬಂದಿದೆ. ಕೊಲೆಗೈದು ಬಳಿಕ ಎಳೆದೊಯ್ಡು ಹೊಂಡಕ್ಕೆ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ.
ಈತನ ಜೇಬಿನಲ್ಲಿ ಲಭಿಸಿದ ದಾಖಲೆಯಿಂದ ಕರ್ನಾಟಕ ಮೂಲದ ಮಂಜುನಾಥ್ (46) ಎಂಬ ಮಾಹಿತಿ ಲಭಿಸಿದೆ. ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ