ಬಂಟ್ವಾಳ, ಮಾ. 18 (DaijiworldNews/T A): ನೇತ್ರಾವತಿ ನದಿ ತೀರದಲ್ಲಿರುವ ಮನೆಯ ಅಂಗಳಕ್ಕೆ ಬೃಹತ್ ಗಾತ್ರದ ಮೊಸಲೆಯೊಂದು ಬಂದ ಘಟನೆ ನಡೆದಿದೆ. ಪೂಪಾಡಿಕಟ್ಟೆ ನೆಕ್ಕಿಲಾರು ರಾಜೇಶ್ ನಾಯಕ್ ಮನೆಯ ಅಂಗಳಕ್ಕೆ ಸುಮಾರು 7 ಅಡಿ ಉದ್ದದ ಮೊಸಲೆ ಅತಿಥಿಯಾಗಿ ಬಂದಿದೆ.

ನೇತ್ರಾವತಿ ನದಿ ತೀರದಿಂದ ಸುಮಾರು 200 ಮೀ ದೂರದಲ್ಲಿ ಇವರ ಮನೆಯಿದೆ. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಮನೆಯ ಹೊರಗೆ ಶಬ್ದ ಕೇಳಿ ಬಂತು ಎಂಬ ಕಾರಣಕ್ಕಾಗಿ ಹೊರಗೆ ಬಂದು ನೋಡಿದಾಗ ಅಂಗಳದಲ್ಲಿ ಮೊಸಲೆ ಕಂಡು ಬಂದಿದೆ. ಅ ಬಳಿಕ ಮೊಸಲೆ ಮನೆಯ ಎದುರಿನ ತೋಟದ ಕಡೆಗೆ ತೆರಳಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಇಲಾಖೆಗೆ ಮಾಹಿತಿ ನೀಡಿಲ್ಲ ಎಂಬುದನ್ನು ತಿಳಿಸಿದ್ದಾರೆ.