ಕಾಸರಗೋಡು, ಮಾ. 18 (DaijiworldNews/T A): ಮಂಜೇಶ್ವರ ಎನ್. ಡಿ. ಎ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಗೋಡೆ ಬರಹ ಪ್ರಚಾರಕ್ಕೆ ಕುಂಬಳೆಯಲ್ಲಿ ಕೇಂದ್ರ ಸಹಾಯಕ ಸಚಿವ ಚಿತ್ರ ನಟ ಸುರೇಶ್ ಗೋಪಿ ಚಾಲನೆ ನೀಡಿದರು.

ಮಂಜೇಶ್ವರ ಮಂಡಲ ಎನ್. ಡಿ. ಅಭ್ಯರ್ಥಿ ಕೆ. ಸುರೇಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ಮಂಜೇಶ್ವರ ಎನ್. ಡಿ. ಎ ಸಂಚಾಲಕ ವಿಜಯ ಕುಮಾರ್ ರೖ, ಹಿರಿಯ ನಾಯಕ ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಕುಂಬಳೆ ಮಂಡಲಾಧ್ಯಕ್ಷ ಸುನಿಲ್ ಅನಂತಪುರ ಸೇರಿದಂತೆ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.