ಮಂಗಳೂರು, ಮಾ. 22 (DaijiworldNews/TA): ನಗರದಲ್ಲಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕುಲಶೇಖರದ ಜ್ಯೋತಿನಗರ ಪ್ರದೇಶದಲ್ಲಿ “ಸ್ವಚ್ಛ ಪರಿಸರ – ನಮ್ಮ ಹೊಣೆಗಾರಿಕೆ” ಎಂಬ ಘೋಷವಾಕ್ಯದೊಂದಿಗೆ ವಿಶೇಷ ಸ್ವಚ್ಛತಾ ಅಭಿಯಾನವನ್ನು ಶೈನಿಂಗ್ ಬಾಯ್ಸ್ ಸ್ಪೋರ್ಟ್ಸ್ ಕ್ಲಬ್ (ರಿ.) ವತಿಯಿಂದ ಆಯೋಜಿಸಲಾಯಿತು.

ಮಾ.22ರಂದು ಬೆಳಿಗ್ಗೆ 7.00ರಿಂದ 11.00 ಗಂಟೆಯವರೆಗೆ ನಡೆದ ಈ ಅಭಿಯಾನದಲ್ಲಿ ಸ್ಥಳೀಯರು, ಯುವಕರು ಹಾಗೂ ಸ್ವಯಂಸೇವಕರು ಭಾಗವಹಿಸಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಕೈಜೋಡಿಸಿದರು. ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
“ನಾವು ಬದಲಾದರೆ – ನಮ್ಮ ಪರಿಸರವೂ ಬದಲಾಗುತ್ತದೆ” ಎಂಬ ಸಂದೇಶದೊಂದಿಗೆ ಎಲ್ಲರೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಸ್ಥಳೀಯರ ಸಕ್ರಿಯ ಸಹಕಾರದೊಂದಿಗೆ ಈ ಅಭಿಯಾನ ಯಶಸ್ವಿಯಾಯಿತು.