ಸುಳ್ಯ , ಮಾ. 27 (DaijiworldNews/TA) : ದೃಷ್ಟಿ ಮೀಡಿಯಾ ಸಂಸ್ಥೆಯ ನಿರ್ಮಾಣದಲ್ಲಿ ತಯಾರಿಸಿರುವ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕುರಿತಾದ ಶತಮಾನಗಳ ನಂಬಿಕೆ ಎಂಬ ಸಾಕ್ಷ್ಯಚಿತ್ರದ ಬಿಡುಗಡೆ ಸುಳ್ಯದಲ್ಲಿ ನಡೆಯಿತು.

ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್ ಭಾರದ್ವಾಜ್ ಅವರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿ, ತೊಡಿಕಾನ ದೇವಸ್ಥಾನದ ಕುರಿತಾದ ಸಾಕ್ಷ್ಯಚಿತ್ರ ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯವನ್ನು ತೋರಿಸುವ ಜತೆಗೆ ಕ್ಷೇತ್ರದ ಪರಿಚಯ, ವಿಶೇಷತೆಯನ್ನು ನಮಗೆ ತಿಳಿಸಿದೆ. ಇಂತಹ ಸಾಕ್ಷಚಿತ್ರಗಳು ಸುಳ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡುವಂತಾಗಲಿ ಎಂದರು. ಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕಿರಿ ಮಾತನಾಡಿ, ತೊಡಿಕಾನನನ್ನ ಮೂಲ ಊರಾಗಿದ್ದು, ಅಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನ ಸೀಮೆ ದೇವಸ್ಥಾನವಾಗಿರುವುದರಿಂದ ಅದರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಿಸಬೇಕೆಂಬ ಹಂಬಲ ಇತ್ತು. ಅದರಂತೆ ಸಾಕ್ಷ್ಯ ಚಿತ್ರ ನಿರ್ಮಿಸಿದ್ದು, ಇದೀಗ ಕನಸು ನನಸಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕಿರಿ, ಹಿರಿಯ ಸಾಹಿತಿ ಡಾ। ಪ್ರಭಾಕರ ಶಿಶಿಲ, ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ. ಸುಧಾಕರ ರೈ ಪಿ.ಬಿ., ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ, ಸದಸ್ಯ ವಸಂತ ಪೆಲ್ತಡ್ಕ,ಕಸಾಪ ಮಾಜಿ ಅಧ್ಯಕ್ಷ ಎ.ಕೆ. ಹಿಮಕರ, ಪಾವನಾ ಸಂತೋಷ್ ಕೊಡೆಂಕೆರಿ ಮತ್ತಿತರರು ಉಪಸ್ಥಿತರಿದ್ದರು.