ಮಂಗಳೂರು, ಏ. 09 (DaijiworldNews/AK): ಜಜೀರಾ ಏರ್ವೇಸ್ ಎ.9 ರಂದು ಕುವೈಟ್ ಮತ್ತು ಮಂಗಳೂರು ನಡುವೆ ದಮ್ಮಾಮ್ ಮೂಲಕ ವಿಶೇಷ ವಿಮಾನ ಹಾರಾಟ ನಡೆಸಿದೆ. ವಾರಕ್ಕೆ ಎರಡು ಬಾರಿ ಚಾರ್ಟರ್ ವಿಮಾನಗಳ ಸೇವೆ ಇರಲಿದೆ.



ಜಿಮ್ಮಿ ಮೌಸಾ ಅವರ ನಾಯಕತ್ವದಲ್ಲಿ 4 ಸದಸ್ಯರ ಸಿಬ್ಬಂದಿಯೊಂದಿಗೆ, ಸಂಜೆ 4.25 ಕ್ಕೆ ಅಗಮಿಸಿದ J9 3417 ದಮ್ಮಾಮ್-ಮಂಗಳೂರು ವಿಮಾನವು 11 ಮಕ್ಕಳು ಸೇರಿದಂತೆ 181 ಪ್ರಯಾಣಿಕರನ್ನು ಹೊತ್ತು ತಂದಿತು. ಬಳಿಕ ಸಂಜೆ 6.10 ಕ್ಕೆ ಹೊರಟ ಜೆ9 3418 ವಿಮಾನವು ಒಂದು ಮಗು ಸೇರಿದಂತೆ 151 ಪ್ರಯಾಣಿಕರು ಇದ್ದರು. . ವಿಮಾನವು ಕುವೈತ್ನಿಂದ ದಮ್ಮಾಮ್ಗೆ ಪ್ರಯಾಣಿಕರನ್ನು ರಸ್ತೆ ಮೂಲಕ ಸಾಗಿಸಿತು.
ಜಜೀರಾ ಏರ್ವೇಸ್ ಈ ಹಿಂದೆ ಕೋವಿಡ್ ಸಮಯದಲ್ಲಿ ವಿಶೇಷ ಚಾರ್ಟರ್ ವಿಮಾನ ಕಾರ್ಯಚರಣೆಗಳನ್ನು ನಡೆಸಿತ್ತು. ಈ ವಿಮಾನಗಳು ಡಿಜಿಸಿಎ ವಿಶೇಷ ಅನುಮತಿಯ ಅಡಿಯಲ್ಲಿ ಕಾರ್ಯನಿರ್ವಹಸಲಿದ್ದು ಅಧಿಕಾರಿಗಳಿಂದ ಅನುಮೋದನೆ ದೊರೆತಲ್ಲಿ ವಿಮಾನಗಳ ಸಂಖ್ಯೆಯನ್ನು ಎಡರಿಂದ ನಾಲ್ಕಕ್ಕೆ ಹೆಚ್ಚಿಸಲು ವಿಮಾನಯಾನ ಸಂಸ್ಥೆಯು ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.