ಉಡುಪಿ, ಏ. 11 (DaijiworldNews/TA) : ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಮೊದಲಾಗಿ ಕಾಮಗಾರಿಯಾಗುವ ಮೊದಲು ಪಡೆದುಕೊಳ್ಳಬೇಕಾದ ಅನುಮತಿಗಾಗಿ ಸಾರ್ವಜನಿಕರು ಪರದಾಡಬೇಕು. ಇದರ ಬಗ್ಗೆ ಮೊದಲು ಸರಿಯಾದ ವ್ಯವಸ್ಥೆಯನ್ನು ಮೊದಲು ಮಾಡಬೇಕಾಗಿದೆ ಎಂದು ತಿಳಿಸಲಾಯಿತು.

ಮಳೆಗಾಲ ಆರಂಭವಾಗುತ್ತಿದೆ ಇದರ ಮುಂಚಿತವಾಗಿ ಯಾವ ಕಾಮಗಾರಿಯನ್ನು ಆರಂಭ ಮಾಡಿಲ್ಲವೆಂದು ನಗರಸಭೆಯ ಅಧ್ಯಕ್ಷರು ಹಾಗೂ ಉಳಿದ ಸದಸ್ಯರು ನಗರ ಸಭೆಯ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಉಡುಪಿಯ ಇಂದ್ರಾಣಿ ನದಿಯ ನೀರಿನ ಜೊತೆಗೆ ಉಳಿದ ಕ್ಷೆತ್ರದ ಮಲೀನ ನೀರನ್ನು ಮಲ್ಪೆಗೆ ಬೀಡುತ್ತಿರುವುದನ್ನು ಗಮನಿಸಿ ಅವೆಲ್ಲವು ಕ್ರಮಗಳು ನಿಲ್ಲಿಸಬೇಕು.
ಮಾತ್ರವಲ್ಲ ಇಂದ್ರಾಣಿ ನದಿಯ ನೀರನ್ನು ಮಲ್ಪೆ ಸಮುದ್ರಕ್ಕೆ ಹೋಗುವಂತೆ ಹೂಳೆತ್ತಬೇಕು ಹಾಗೂ ಮಲೀನ ನೀರು ಎಲ್ಲಿಂದ ಬರುತ್ತದೆ ಅದನ್ನು ಕಂಡುಹಿಡಿದು ಕೂಡಲೇ ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಂಭಂಧಿಸಿದಂತೆ ಔಷಧಿಯನ್ನು ಸಿಂಪಡಿಸಬೇಕು ಇಲ್ಲವಾದಲ್ಲಿ ಸ್ಥಳಿಯರು ಕ್ರಮ ಕೈಗೊಳ್ಳುತ್ತೆವೆ ಎಂದು ಸದಸ್ಯರು ಸೂಚನೆಯನ್ನು ನೀಡಿದರು.