ಮಂಜೇಶ್ವರ, ಏ. 16 (DaijiworldNews/TA): ಕುಂದುಕೊಳಕೆ ಕಡಲ ಕಿನಾರೆಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಗುರುವಾರ ಸಂಜೆ ಹೊಸಬೆಟ್ಟು ಕಡಲತೀರದಲ್ಲಿ ಪತ್ತೆಯಾಗಿದೆ.

ಮಂಜೇಶ್ವರ ಚೌಕಿಯ ಉಮ್ಮರುಲ್ ಫಾರೂಕ್ - ರಝೀನಾ ದಂಪತಿ ಪುತ್ರ ಮುಹಮ್ಮದ್ ಜೈನುಲ್ ಆಬಿದ್ ಮೃತ ದುರ್ದೈವಿ. ಬುಧವಾರ ಸಂಜೆ ಸ್ನೇಹಿತರ ಜೊತೆ ಕಡಲ ಕಿನಾರೆಗೆ ತಲಪಿದ್ದ ಸಂದರ್ಭದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದರು.
ನಾಗರಿಕರು , ರಕ್ಷಣಾ ತಂಡಗಳು ಶೋಧ ನಡೆಸಿದ್ದವು. ಈ ನಡುವೆ ಘಟನೆ ನಡೆದ ಸ್ಥಳದಿಂದ ಅಲ್ಪದೂರದ ಹೊಸಬೆಟ್ಟು ತೀರದಲ್ಲಿ ಗುರುವಾರ ಸಂಜೆ ಮೃತದೇಹ ಪತ್ತೆಯಾಗಿದೆ . ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.