ಮಂಗಳೂರು, ಏ. 16 (DaijiworldNews/TA) : ಸುಡುಬಿಸಿಲಿನ ತಾಪಕ್ಕೆ ಬೆಂಡಾಗಿದ್ದ ಭುವಿಗೆ ಮಳೆ ತಂಪೆರೆದಿದೆ. ಬೋಂದೆಲ್, ಪದವಿನಂಗಡಿ, ಕಾವೂರು, ಇತರ ನಗರಾದ್ಯಂತ ರಾತ್ರಿ ವರ್ಷಧಾರೆಯಾಗಿದೆ.

ಕಳೆದ ಕೆಲ ದಿನಗಳಿಂದ ಸುಡುಬಿಸಿಲಿನ ತಾಪಕ್ಕೆ ಬೆಂದಿದ್ದ ಮಂಗಳೂರಿನಲ್ಲಿ ಕೊನೆಗೂ ಮೊದಲ ಮಳೆಯ ಸಿಹಿ ಅನುಭವವಾಗಿದೆ. ರಾತ್ರಿ ವೇಳೆ ಸುರಿದ ಮಳೆಯು ಇಡೀ ನಗರಕ್ಕೆ ತಂಪು ನೀಡಿದೆ.
ಬೋಂದೆಲ್, ಪದವಿನಂಗಡಿ, ಕಾವೂರು ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದೆ. ಈ ಮೊದಲ ಮಳೆ ಬೇಸಿಗೆಯ ತಾಪವನ್ನು ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.