ಉಡುಪಿ, ಏ. 17 (DaijiworldNews/AA): ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಉದ್ಯಮಿ ಇನ್ನಾ ಉದಯ ಶೆಟ್ಟಿ (50) ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ನಿಧನರಾದರು.


ಮೃತರು ಪತ್ನಿ, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಒಬ್ಬಳು ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಬೆಳ್ಮಣ್ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷರಾಗಿದ್ದ ಇನ್ನಾ ಉದಯ ಶೆಟ್ಟಿ ಅವರು ಪಡುಬಿದ್ರಿಯಲ್ಲಿ ಟಯರ್ ರಿಸೋಲ್ ಮಳಿಗೆಯನ್ನು ನಡೆಸುತ್ತಿದ್ದರು.