ಕಾಸರಗೋಡು, ಏ. 18 (DaijiworldNews/TA): ಮಂಜೇಶ್ವರ ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ವಿಧಿವಿಧಾನಗಳು ಶುಕ್ರವಾರ ನೆರವೇರಿತು. ದೈವ ಪಾತ್ರಿಗಳು ಶುಕ್ರವಾರ ಮಧ್ಯಾಹ್ನ ಉದ್ಯಾವರ ಜಮಾಅತ್ ಮಸೀದಿಗೆ ಭೇಟಿ ನೀಡಿ ಮುಸ್ಲಿಮರನ್ನು ಜಾತ್ರೆಗೆ ಆಹ್ವಾನಿಸಿದರು.

ಮೇಷ ಸಂಕ್ರಮಣದ ಬಳಿಕ ಮೊದಲ ಶುಕ್ರವಾರ ಈ ರೀತಿ ಭೇಟಿ ನೀಡಿ ಜಾತ್ರೆಗೆ ಆಹ್ವಾನ ನೀಡುವುದು ಶತಮಾನಗಳ ಹಳೆಯ ಸಂಪ್ರದಾಯವಾಗಿದೆ. ದೈವಪಾತ್ರಿಗಳನ್ನು ಮಸೀದಿ ಆಡಳಿತ ಮಂಡಳಿ ಹಾಗೂ ಜಮಾಅತರು ಬರಮಾಡಿಕೊಂಡರು. ಮೇ 9ರಂದು ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ಲಭಿಸಲಿದ್ದು, ಮೇ 11 ಮತ್ತು 12 ರಂದು ಉದ್ಯಾವರ ಅರಸು ಮಂಜಿಸ್ಟಾರ್ ಕ್ಷೇತ್ರದ ವಾರ್ಷಿಕ ಉತ್ಸವ ನಡೆಯಲಿದೆ.