ಮಂಗಳೂರು, ಏ. 20 (DaijiworldNews/TA): ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದು, ಇದರ ವಿರುದ್ಧ ಹೋರಾಟ ಕೈಗೆತ್ತಿಕೊಂಡಿದ್ದು, ಬಜರಂಗ ದಳ ಮತ್ತು ದುರ್ಗಾವಾಹಿನಿ ಜಂಟಿ ಕಾರ್ಯಕ್ರಮ ನಡೆಸಲಿದೆ. 2-3 ತಿಂಗಳಲ್ಲಿ 6 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜಿಸಲಾಗಿದೆ. ಲಕ್ಷಾಂತರ ಯುವಕರು ಡ್ರಗ್ಸ್ನಿಂದ ದೂರ ಇರುವ ಪ್ರತಿಜ್ಞೆ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಮಿಲಿಂಡ್ ಪರಾಂಡೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಮಿಳುನಾಡು ಮತ್ತು ಕೇರಳದಲ್ಲಿ ಅವ್ಯಾಹತ ಗೋವು ಕಳ್ಳಸಾಗಾಟ ನಡೆಯುತ್ತಿದೆ. ಕರ್ನಾಟಕ ಸರಕಾರ ಗೋಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಿನಲ್ಲಿ ಜಾರಿಗೆ ತರಬೇಕು, ಸಾಗಾಟದ ವಾಹನ ಮಾಲೀಕರ ಮೇಲೂ ಕೇಸು ದಾಖಲಿಸಿ, ವಾಹನ ಜಪ್ತಿ ಮಾಡಬೇಕು. ಗೋ ಸಾಗಾಟದ ಮಾರ್ಗ ಗುರುತಿಸಿ, ಪೊಲೀಸ್ ಹೊರ ಠಾಣೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.