ಮಂಗಳೂರು, ಏ. 20 (DaijiworldNews/TA): ನಗರದಾದ್ಯಂತ ಹಲವೆಡೆ ಸಂಜೆಯ ವೇಳೆಗೆ ಕೊಂಚ ಮಟ್ಟಿನ ಮಳೆಯಾಗಿದ್ದು ಬಿರುಗಾಳಿ ಅಬ್ಬರದಿಂದಾಗಿ ಯಕ್ಷಗಾನ ರಂಗಸ್ಥಳ ಧೂಳಿನಿಂದ ಆವೃತವಾದ ಘಟನೆ ನಡೆದಿದೆ.

ಶಕ್ತಿನಗರದಲ್ಲಿ ಬೀಸಿದ ಬಿರುಗಾಳಿಯ ಪರಿಣಾಮ ಯಕ್ಷಗಾನ ಬಯಲಾಟದ ರಂಗಸ್ಥಳ ಧೂಳಿನಿಂದ ಆವರಿಸಿಕೊಂಡಿತ್ತು. ಯಕ್ಷಗಾನದ ಚೌಕಿ, ಹಾಗು ಕಾರ್ಯಕ್ರಮದ ಸಲುವಾಗಿ ಹಾಕಿದ್ದ ಶಾಮಿಯಾನ ಸೇರಿದಂತೆ ಅಲಂಕಾರಿಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ ಎಂದು ತಿಳಿದು ಬಂದಿದೆ.