ಮಂಗಳೂರು, ಏ. 20 (DaijiworldNews/TA): ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಏಪ್ರಿಲ್ 21ರ ಮಂಗಳವಾರದಂದು ಗೋಲ್ಡನ್ ಟ್ರಾವೆಲ್ಸ್ ನ ಕಟೀಲು ಮಾರ್ಗವಾಗಿ ಚಲಿಸುವ ಎಲ್ಲಾ ಎಂಟು ಸರ್ವಿಸ್ ಬಸ್ಸುಗಳು ಪ್ರಯಾಣಿಕರಿಗೆ ಉಚಿತ ಪ್ರಯಾಣದ ಸೇವೆಯನ್ನು ನೀಡಲಿದೆ.

ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಸರ್ವಿಸ್ ಬಸ್ಸುಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೂ ಉಚಿತ ಪ್ರಯಾಣದ ಸೌಕರ್ಯವನ್ನು ಸಂಸ್ಥೆ ಒದಗಿಸಿದೆ. ಪ್ರತೀ ವರ್ಷವೂ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೋತ್ಸವಕ್ಕೆ ಒಂದು ದಿನದ ಉಚಿತ ಪ್ರಯಾಣದ ಸೇವೆಯನ್ನು ಪ್ರಯಾಣಿಕರಿಗೆ ನೀಡುತ್ತಿದ್ದು ಈ ಬಾರಿಯೂ ಅದನ್ನು ಮುಂದುವರಿಸಲಾಗಿದೆ. ಆದುದರಿಂದ ಎಲ್ಲಾ ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮಾಲಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.