ಮಣಿಪಾಲ, ಏ. 25 (DaijiworldNews/TA): ಶಿವಳ್ಳಿ ಗ್ರಾಮದ ಖಾಸಗಿ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಹೊಟೇಲಿನ ಸಿಬಂದಿ ತಂಗುವ ಕೊಠಡಿಯ ಸ್ನಾನ ಗೃಹದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.

ಕಾರ್ಕಳ ಮಾಳ ಗ್ರಾಮದ ವಿಜಯ ಎಸ್. (48), ಎ.24ರಂದು ಬೆಳಗ್ಗೆ ಹೊಟೇಲಿನ ಸಿಬಂದಿ ತಂಗುವ ಕೊಠಡಿಯ ಸ್ನಾನದ ಕೋಣೆಯಲ್ಲಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಹೊಟೇಲಿನ ಇತರ ಸಿಬಂದಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ವಿಜಯ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.