ಮಂಗಳೂರು, ಏ. 25 (DaijiworldNews/AA): ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಏ.25ರಂದು ದಸ್ತಗಿರಿ ಮಾಡಿದ್ದಾರೆ.

ಮಂಗಳೂರಿನ ಬಂದರು ರೋಡ್ ನಿವಾಸಿ, ಪ್ರಸ್ತುತ ಮಂಗಳೂರು, ಕುಲಶೇಖರ ನಿವಾಸಿ ಟಿ ಪಿ ಮುನೀರ್ ಅಹಮ್ಮದ್ ಅಲಿಯಾಸ್ ಅಹಮ್ಮದ್(59) ದಸ್ತಗಿರಿಯಾದ ಆರೋಪಿ
ಆರೋಪಿಯು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 436 ಮತ್ತು 149 ರ ಅಡಿಯಲ್ಲಿ ದಾಖಲಾದ ಕ್ರೈಂ ನಂಬರ್ 291/1998 ರ ಪ್ರಕರಣದಲ್ಲಿ ಬೇಕಾಗಿದ್ದ ವ್ಯಕ್ತಿಯಾಗಿದ್ದಾನೆ. ಈ ವಿಷಯವು ಪ್ರಸ್ತುತ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್ಸಿ ಸಂಖ್ಯೆ 68/2024 ರ ಅಡಿಯಲ್ಲಿ ವಿಚಾರಣೆಗೆ ಬಾಕಿ ಇತ್ತು.
ಆರೋಪಿಯು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 2 ವರ್ಷಗಳಿಂದ ತಲೆ ಮರೆಸಿಕೊಂಡಿದ್ದರಿಂದ ಮಾನ್ಯ ನ್ಯಾಯಾಲಯವು ಆರೋಪಿತನಿಗೆ ವಾರೆಂಟ್ ಹೊರಡಿಸಿತ್ತು. ಈ ಆರೋಪಿಯನ್ನು ಶನಿವಾರ ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿರವರು ಕುಲಶೇಖರದಲ್ಲಿರುವ ಆತನ ಬಾಡಿಗೆ ಮನೆಯಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾನ್ಯ ನ್ಯಾಯಾಲಯವು ವಾರೆಂಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.