ಮಂಗಳೂರು, ಮೇ. 27 (DaijiworldNews/AK): ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಗಳಾದ ಸುರತ್ಕಲ್ ಮುಕ್ಕದ ನಿವಾಸಿ ಮೊಹಮ್ಮದ್ ರಾಝಿಕ್(36) , ಬೈಕಂಪಾಡಿ ಅಂಗರಗುಂಡಿಯ ನಿವಾಸಿ ಉಬೈದತ್ ಹೈದರ್(31) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಳುವಾದ ಬೈಕ್ ಹಾಗೂ 2 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೇ 18 , 2026 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ಜಂಕ್ಷನ್ ಬಳಿ ಅಪೋಲೊ ಫಾರ್ಮಾ ಹತ್ತಿರ ನಿಲ್ಲಿಸಿದ ಹೋಂಡಾ ಯುನಿಕಾರ್ನ್ (ಕೆಎ 20 ಇಬಿ 6383) ಬೈಕ್ ಅನ್ನು ಆರೋಪಿಗಳು ಕಳ್ಳತನ ಮಾಡಿದ್ದಾರೆ.
ಸುಮಾರು 20000 ರೂ. ಮೌಲ್ಯದ ಕಳುವಾದ ಕೆಎ 20 ಇಬಿ 6383 ಹೋಂಡಾ ಯುನಿಕಾರ್ನ್ ಬೈಕ್ ಹಾಗೂ ಸುಮಾರು 18000 ರೂ ಮೌಲ್ಯದ ಮೊಬೈಲ್ ಪೋನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮುಲ್ಕಿ ಠಾಣೆಯ ಪಿಎಸ್ಐ ಹಾಗೂ ಕ್ರೈಂ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸವಲ್ಲಿ ಯಶಸ್ಸಿಯಾಗಿದ್ದಾರೆ. ಅರೋಪಿ ಮೊಹಮ್ಮದ್ ರಾಝಿಕ್ ಮೇಲೆ ಈ ಹಿಂದೆ ಸುರತ್ಕಲ್ , ಪಣಂಬೂರು , ಮುಲ್ಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಉಬೈದತ್ ಹೈದರ್ ವಿರುದ್ದ ಕೂಡ ಪಣಂಬೂರು ಪೊಲೀಸ್ ರಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.