ಸುಳ್ಯ, ಮೇ. 29 (DaijiworldNews/TA): ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ.

ಗ್ರಾಮದ ಕದಳಿವನ ಈಶ್ವರ ಭಟ್ ಅವರ ತೋಟಕ್ಕೆ ನುಗ್ಗಿ 75 ಅಡಿಕೆ ಮರ 250 ಬಾಳೆ ಗಿಡಗಳನ್ನು ನಾಶ ಮಾಡಿವೆ ಎಂದು ಮನೆಯವರು ತಿಳಿಸಿದ್ದಾರೆ. ಇದಲ್ಲದೆ ಅಕ್ಕ ಪಕ್ಕದ ಕೃಷಿಕರ ತೋಟಕ್ಕೆ ನುಗ್ಗಿದ ಕಾಡಾನೆಗಳು ತೆಂಗು,ಬಾಳೆ,ಅಡಿಕೆ ಇತರ ಬೆಳೆಗಳನ್ನು ನಾಶ ಪಡಿಸಿವೆ.