ಬಂಟ್ವಾಳ, ಜೂ. 15 (DaijiworldNews/TA): ನಾವೂರು ಶ್ರೀ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ದೀರ್ಘಾವಧಿ ಆಡಳಿತ ಪ್ರಯುಕ್ತ ಅವರ ಒಳಿತಿಗಾಗಿ ವಿಶೇಷ ಪೂಜೆ ನಡೆಯಿತು.

ನರೇಂದ್ರ ಮೋದಿಯವರ ಆರೋಗ್ಯ ವೃದ್ದಿಯಾಗಲಿ, ಅವರ ಆಡಳಿತ ಅವಧಿಯಲ್ಲಿ ದೇಶ ಸುಭೀಕ್ಷೆಯಾಗಲಿ, ಕಷ್ಟಕಾರ್ಪಣ್ಯಗಳು ದೂರವಾಗಲಿ, ದೇಶ ಸಂಪತ್ಬರಿತವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿಗುತ್ತು, ಬಿಜೆಪಿ ಪ್ರಮುಖರಾದ ಸುದರ್ಶನ್ ಬಜ, ಶಾಂತವೀರ ಪೂಜಾರಿ, ಮುರಳಿದರ್ ಭಟ್, ಜನಾರ್ದನ ಕೊಂಬೆಟ್ಟು, ನಾರಾಯಣ ಕಿನ್ನಿಯೂರು, ಸದಾನಂದ ಹಳೆಗೇಟು ಹಾಗೂ ಬಿ ಜೆ ಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.